Tuesday, April 24, 2012

ಗೊಂದಲದ ಗೂಡು


ಸತ್ಯವಲ್ಲದ ಸಂಬಂಧ
ಪುಷ್ಪಕ ವಿಮಾನದ ಕನಸಿನಲಿ
ಎರುತಿರಲು
ತಂಪು ತಂಗಾಳಿಯ
ಅನುಭವ ಬಯಸಿದೆ.
ಹುಳವೊಂದು ಬಂದು
ಕಾಲನೆರುತಿರಲು
ಕಿತ್ತೆಸೆಯಲು ವೃಥಾ ಕಲಹರಣದಲಿ
ಕೋಗಿಲೆಯೊಂದಿಗೆ
ಮತ್ತದೆ ಯುಗಾದಿ.
ಒಬ್ಬಂಟಿ ಮರವೊಂದಿರಲು
ಹಕ್ಕಿಗಳು ಗೂಡು ಕಟ್ಟುತಿಹವು
ವಾರಸುದಾರ ನಾನೆನ್ನಲು
ಹಕ್ಕಿಲ್ಲ....
ಉತ್ತಿರುವ ಮನದಲಿ
ಹೆಂಟೆಗಳ ರಾಶಿ ಬಿದ್ದಿದೆ
ಬಿತ್ತಿದರೆ
ಭೂಮಿ ಬಂಜರಾಗುವ
ಭಯ.....
ಕಪ್ಪು ಮೊಡದಲಿ
ಲೀನವಾಗುತ್ತಲೆ
ದೂರದ ಬೆಳಕಿನ
ಕನಸ ಕಂಡವನು
ಹೊಸ ಲೇಖನಿಯ
ಹುರುಪಿನಲಿ
ಧೃಷ್ಟಾಂತದ ಕವನ ಬರೆದವನು.....
ಅವಳೇನೊ ಗೊತ್ತಿಲ್ಲ...?
ಸ್ವಚ್ಚವಾಗಿದ್ದೇನೆ ಎಂದೆನಿಸತೊಡಗಿದ್ದೆನೆ
ನನ್ನ ಬಿಳುಚೀದ
ಕಣ್ಣು ಉಗುರುಗಳಲ್ಲಿ
ಸಹಿಸಲಾಗುತ್ತಿಲ್ಲಾ
ಚಿಲಿಪಿಲಿ ಗುಟ್ಟಲಾಗುತ್ತಿಲ್ಲಾ
ಅಣಕಿಸುತಿದೆ ಗುಬ್ಬಚ್ಚಿ......


ನೀ........ನೇ.......ನಾ........?


ನನ್ನೆದೆಯ ಮೇಲೆ
ನೀ ಅಳಿಸದೆ
ಬರೆದ ನೆನಪುಗಳು
ಮರುಕಳಿಸಿ ಮುತ್ತು.
ಆ ವಿಷದ ಮುತ್ತಿನಲ್ಲೆ
ನನ್ನ ನಿತ್ಯ ಮರುಜೀವ....
ಇಟ್ಟುಕೊಂಡ ಪ್ರಶ್ನಾರ್ಥಕವು
ಅದು......
ನೀ........ನೇ.......ನಾ........?
ನಿನ್ನ ಮತ್ತಿನ ಕ್ಷಣಗಳಲ್ಲೆ
ರಿಂಗಣಿಸುವ ಮನವು
ಅನವರತ ಸಾಗಿ
ಬಿಕ್ಕಳಿಸುವುದು
ನಿನ್ನೆದೆಯ ಮೇಲೆ.....
ಆ ನಿನ್ನ ಹಸಿ ಎದೆಯು
ಅದೇಷ್ಟು ಸಂಪು.....
ಬೋಕ್ಕಸಕ್ಕೆ ಬೆಡುವನಲ್ಲ
ಆದರೆ... ಆ ಪ್ರೀತಿಯ
ಹೊಣೆಗಾರಿಕೆಯು ನಿನ್ನದಿದೆಯಲ್ಲ........?

ಸಂದೇಶಗಳ ಕಲರವ




ಉಸಿರು ನಿಂತಲ್ಲಿ
ನಾ ನಿಲ್ಲಲಾದೇನು
ಹೊರಳಾಡಿದ ಹಾಸಿಗೆಯಲ್ಲಿ
ಕನ್ನಡಿಯಲ್ಲಿ
ನಿನ್ನದೇ ಕಣ್ಣ ಸಂದೇಶಗಳು
ರೇಪ್ಪೆ ಬಡಿದರೆ ಕಣ್ಣಿರಿಲ್ಲ.....
ಭಾವನೆಗಳ ಭರದಲಿ
ಕಂಡದ್ದೆಲ್ಲಾ ಮಂಜು ಮಂಜು
ಇಟ್ಟ ಆಸೆಗಳು
ಮೋಸ ಮಾಡದೆ
ಉಳಿದು ಹೋದವು
ಎದೆಯಲಿ....
ನಿನ್ನ ಅಲ್ಪವಿರಾಮದಲಿ
ನನ್ನ ಉತ್ಕರ್ಷ
ಮಂಕಾಗಿದೆ...
ಮರುಗಲಾರೆನು ...,
ನಾನು ಭಾವಪರ
ಬವಣಿಸುತಲೆ ಬದುಕಿಹೆನು....
ನಿನು ಕೊಟ್ಟ ಎದೆಯಾಳದ ತೂಕ
ಬತ್ತದಿರಲಿ.....
ಮೇಲೂಸಿರಿನ ಭಾವನೆಗಳು
ಇಬ್ಬರ ಹಾಸಿಗೆಯಲಿ
ಎಚ್ಚರದಿ ಕುಳಿತಿವೆ,
ಅಂಧನಾದೆ..... ಮೋಹಿಸಿದೆ........
ಕೊನೆಗೆ ಕೊಂದುಬಿಟ್ಟೆ
ಸಂದೇಶಗಳ ಕಲರವ.....



ಪರಿಕ್ಷೇ..... ನಿರಿಕ್ಷೇ....

 ಎದೆಯಲಿ ಸುಟ್ಟವನು
ಕೊನೆಗು ಕೊಂದಲು ಅಣಿಯಾದವನು
ಕರಕಲು ಮನಸು
ಬೆಂಕಿಯಂತೆ ಕಾದಿರಲು
ತಣ್ಣಗೆ ಬರುತಿವೆ ಕಣ್ಣೀರು
ಕಣ್ಣ ಬುಗ್ಗೆಯಲಿ ಅವಳಿಲ್ಲ.
ತಿಳುವಳಿಕೆ ನನ್ನದೆನೊ.....?
ಅವಳದೆಷ್ಟೋ.........?
ಹಿಡಿದ ಹಾದಿಯೆ ದೃಷ್ಟಾಂತ..
ಕೊನೆಯ ಉಸಿರಿಗೂ ತಾಗದಂತಾಗಬೆಕೆಂದಿದ್ದೇನೆ,
ಸಹಿಸಲಾಗುತ್ತಿಲ್ಲ
ಬಿಸಿಲ ಧಗೆಯಲಿ
ಮಳೆ ಮೋಡ ಗುಡುಗಿನ ಶಬ್ಧ.
ಹೂವಾಡಗಿತ್ತಿ
ನೀನು ಕೊಟ್ಟ
ಅದೆಷ್ಟು ಹೂವುಗಳನು
ಎಲ್ಲೆಲ್ಲಿ ಪೂಸಿದರು,
ನಾನು ಪೂಸಿಕೊಂಡೆನಾ....
ನನ್ನ ಮನಕೆ....?
ಅಥವಾ
ಮೊಗ್ಗು ಮಲ್ಲಿಗೆಗಳ
ಸುಗಂಧಕೆ ನಲುಗಿದೆನಾ.......?
ಚೌಕಟ್ಟಿನಲ್ಲಿ ಬೆಳೆದವನು
ಅದೆನೊ ನಿನ್ನ ನಿರಾತಂಕದಲಿ
ಸಾಯುವ ಕನಸು
ನಾನೆಂದು ಕಂಡವನಲ್ಲಾ,
ಬೆಳೆದು ನಿಂತು
ಎಲ್ಲವನ್ನು ಸ್ವೀಕರಿಸಿದವನು
ಬಿರುಗಾಳಿ ಬಿಸಿ
ಕರುಳ ಬಳ್ಳಿ
ಕಿತ್ತು ಹೊಗಲಿ
ನಿನ್ನೊಂದಿಗೆ....
ಅಪನಂಬಿಕೆ ಎನ್ನುವ ಮಾತಿಲ್ಲ
ಅಂತರಾಳದಲಿ.....
ನಿಂತೊಮ್ಮೆ ಇಣುಕಿದರೆ
ನೀಲಿ ಆಕಾಶವನ್ನಷ್ಟೆ ನಿರಿಕ್ಷೀಸಿದವನು.